Wednesday, November 7, 2007

ಶುಭಾಶಯ ಪತ್ರಗಳು - ಏನೋ ಹೊಸತು....

ಶುಭಾಶಯ - ಶುಭ + ಆಶಯ ಅಂದರೆ ಶುಭವನ್ನು ಆಶಿಸುವುದು. ಯಾವುದೇ ಶುಭ ಸಂದರ್ಭಕ್ಕೆ ನಮಗೆ ಹತ್ತಿರವಾದವರಿಗೆ ಶುಭ ಕೋರುವ ಸಂಪ್ರದಾಯ ನಮ್ಮಲ್ಲಿ ಅನಾದಿಕಾಲದಿಂದಲೂ ಬಂದಿದೆ. ನಾವು ಆ ಸಂದರ್ಭದಲ್ಲಿ ಸ್ವತಃ ಭಾಗಿಯಾಗುತ್ತೇವೆಯಾದರೆ ಶುಭಕೋರುವ ಪರಿಯೇ ಬೇರೆ. ಒಂದು ವೇಳೆ ನಾವು ಸ್ವತಃ ಅದರಲ್ಲಿ ಭಾಗವಹಿಸಲು ಸಾಧ್ಯವಾಗದೇ ಹೋದರೆ ಶುಭಾಶಯ ಕೋರಿ ಒಂದು ಪತ್ರ ಮುಖೇನ ನಮ್ಮ ಮನಃಪೂರ್ವಕ ಶುಭಾಶಯಗಳನ್ನು ಕಳುಹಿಸುವ ಪದ್ದತಿ ಬಹಳ ಕಾಲದಿಂದಲೂ ಬಂದಿದೆ. ಹೀಗೆ ಶುಭಾಶಗಳನ್ನು ಕಳುಹಿಸಲು ನಾವು ಬಹಳಸ್ಃಟು ವಿಧಾನಗಳನ್ನು ಕ್ಂಡುಕೊಂಡಿದ್ದೇವೆ. ಪತ್ರ ರೂಪದಲ್ಲಿ ಕಳುಹಿಸುವ ಪದ್ದತಿ ರಾಜ ಮಹಾರಾಜರ ಕಾಲದಿಂದಲೂ ನಡೆಯುತ್ತಾ ಬಂದಿದೆ. ಆದರೆ ಈಗ ಒಂದು ತರಹದ Fast ಯುಗ. ಥಟ್ ಎಂದು ನಾವು ನಮ್ಮ ಕೆಲಸಗಳನ್ನು ಮುಗಿಸಲೆತ್ನಿಸುತ್ತಿರುತ್ತೇವೆ. ಜೊತೆಗೆ ನಮಗೆ ಸಹಾಯ ನೀಡಲು ಹಾಗು ನಮ್ಮ ಕೆಲಸ ಕಾರ್ಯಗಳನ್ನು ಸುಗಮಗೊಳಿಸಲು ಅಂತರ್ಜಾಲವೂ ಇದೆ. ಹೀಗಾಗಿ ಶುಭಾಶಯಗಳನ್ನು ಕಳುಹಿಸಲು ಹಾಗು ನಮ್ಮ ಮನಸ್ಸಿನ ಭಾವನೆಗಳನ್ನು ತಿಳಿಸಲು ಬಹಳ Easy ಆಗಿದೆಯೇನೋ ಅಂದರೆ ಉತ್ಪ್ರೇಕ್ಷೆಯಾಗಲಾರದು.
ಇಂತಹ ಸಂದರ್ಭದಲ್ಲಿ ಅಂತರ್ಜಾಲದಲ್ಲಿ ಇ-ಶುಭಾಶಯ ಪತ್ರಗಳು ಸಿಗುವ ಬಹಳಷ್ಟು ತಾಣಗಳಿವೆ ಹಾಗು ಅವುಗಳಲ್ಲಿ ವಿಧ ವಿಧದ ಸಂದರ್ಭಗಳಿಗೆ ತಕ್ಕ ಇ-ಶುಭಾಶಯ ಪತ್ರಗಳು ಲಭ್ಯವಿವೆ. ಆದರೂ ಇವುಗಳಲ್ಲಿ ಬಹಳಷ್ಟು ತಾಣಗಳಲ್ಲಿ ಲಭ್ಯವಿರುವ ಪತ್ರಗಳು ಆಂಗ್ಲ ಭಾಷೆಯಲ್ಲಿರುತ್ತವೆ. ನಮಗೆಷ್ಟೋ ಜನರಿಗೆ ಇಂತಹ ಇ-ಶುಭಾಶಯ ಪತ್ರಗಳು ನಮ್ಮ ಮಾತೃ ಭಾಷೆಯಾದ ಕನ್ನಡದಲ್ಲಿದ್ದರೆ ಎಷ್ಟು ಚೆನ್ನ ಎಂದೆನಿಸಲ್ಲ ಹೇಳಿ?
ಇಂತಹ ಜನರಿಗೆ ಕಲವು ತಾಣಗಳು ಕನ್ನಡದಲ್ಲಿ ಶುಭಾಶಯ ಪತ್ರಗಳನ್ನು ಕೊಟ್ಟಿವೆ.... ಆದರೂ ಅವುಗಳಲ್ಲಿ ನಮ್ಮತನವನ್ನು ನಾವೆಂದೂ ಕಾಣಲಿಲ್ಲವೇನೋ?? ಕಲವೊಂದು ಸಂಪೂರ್ಣ ಕನ್ನಡ ಶುಭಾಶಯ ಪತ್ರಗಳ ತಾಣಗಳೂ ಹುಟ್ಟಿಕೊಂಡಿವೆ. ಇಂಥದ್ದೇ ಒಂದು ಪ್ರಯತ್ನ http://www.kannada-greetings.com/ ಇದು ಒಂದು ಹೊಚ್ಹ ಹೊಸ ತಾಣ. ಇದರ ಮೂಲಕ ಕನ್ನಡದಲ್ಲೆ ಅಚ್ಹು ಕಟ್ಟಾದ ಶುಭಾಶಯಗಳನ್ನು ಒದಗಿಸುವ ಒಂದು ಪ್ರಯತ್ನವೊಂದನ್ನು ನಮ್ಮ ಸ್ನೇಹಿತರೊಬ್ಬರು ಕೆನಡಾ ದೇಶದಲ್ಲಿದ್ದುಕೊಂಡು ಮಾಡಿದ್ದಾರೆ. ಇದರಲ್ಲಿನ ಶುಭಾಶಯ ಪತ್ರಗಳ ಮೂಲಕ ಹಬ್ಬ, ಹುಟ್ಟುಹಬ್ಬ, ಪ್ರೀತಿ, ವಿರಹ, ಸ್ನೇಹ, ಮದುವೆ ಇತ್ಯಾದಿ ಯಾವುದೇ ವಿಷಯಗಳ ಮೇಲೆ ಸ್ನೇಹಿತರಿಗೆ ಹಾಗೂ ಬಂಧು ಮಿತ್ರರಿಗೆ ಶುಭ ಕೋರಬಹುದಾಗಿದೆ. ಓರ್ಕುಟನ ಸ್ಕ್ರಾಪ್ಸ್ ಮೂಲಕ ಕೂಡ ಇದರಲ್ಲಿನ ಶುಭಾಶಯಗಳನ್ನು ರವಾನೆ ಮಾಡಬಹುದಾಗಿದೆ. ಕನ್ನಡಿಗರೊಬ್ಬರ ಈ ಪ್ರಯತ್ನಕ್ಕೆ ನಮ್ಮ ನಿಮ್ಮೆಲ್ಲರ ಸಹಕಾರ-ಸಲಹೆ-ಪ್ರೋತ್ಸಾಹ ಅತ್ಯಗತ್ಯ.
  • ಕನ್ನ್ಡಡದಲ್ಲಿನ ನನ್ನ ಈ ಮೊದಲ ಪ್ರಯತ್ನಕ್ಕೆ (ಬೈದು :-) ) ಪ್ರೋತ್ಸಾಹಿಸಿದ ಸಂಜಯ್ ಕಟ್ಟೀಮನಿಯವರಿಗೆ ನನ್ನ ಧನ್ಯವಾದಗಳು

No comments: