Tuesday, November 13, 2007

ಅಂತೂ ಇಂತೂ ಬಿಜೆಪಿ ಬಂತು.... ಮುಂದೆ??


ಇತ್ತೀಚೆಗೆ ಬಹಳ ಜನಪ್ರಿಯವಾಗಿರುವ "ಮಿಲನ" ಚಿತ್ರದ ಹಾಡಾದ ’ಅಂತೂ ಇಂತೂ ಪ್ರೀತಿ ಬಂತು’ ಹಾಡನ್ನು ನೆನಪಿಸುವಂತೆ ಆಗಿದೆ ಕರ್ನಾಟಕದ ರಾಜಕೀಯ ಪರಿಸ್ಥಿತಿ. ಸುಮಾರು ಒಂದು ತಿಂಗಳ ರಾಜಕೀಯ ನಾಟಕವನ್ನು ನೋಡಿದ ಜನ ಇಂದು ಎಡ್ಯೂರಪ್ಪರವರನ್ನು ಮುಖ್ಯಮಂತ್ರಿಯಾಗಿ ನೋಡುತ್ತಿದ್ದಾರೆ. ಇದರಂತೆ ಭಾರತೀಯ ಜನತಾ ಪಾರ್ಟಿ(ಬಿಜೆಪಿ) ದಕ್ಷಿಣ ಭಾರತದಲ್ಲಿ ತನ್ನ ಮೊದಲ ಸರ್ಕಾರ ಸ್ಥಾಪಿಸುವಾಲ್ಲಿ ಯಶಸ್ವಿಯಾಗಿದೆ. ಸರ್ಕಾರ ಹೇಗೆಯಾದರೂ ಸ್ಥಾಪಿಸಲ್ಪಟ್ಟಿರಲಿ, ಅದರ ಸ್ಥಿರತೆಯ ಬಗ್ಗೆ ಜನರಿಗೆ ಎಷ್ಟೇ doubt ಇರಲಿ, ಬಿಜೆಪಿಗೆ ಇದು ಒಂದು ಗೆಲುವಿನಂತೆಯೇ....ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಪಡೆದರೂ ಕೂಡ ಸರ್ಕಾರ ರಚಿಸುವ ಸ್ಥಿತಿಯಲ್ಲಿ ಬಿಜೆಪಿ ಆಗ ಇರಲಿಲ್ಲ. ಇದ್ದಕ್ಕಿದಂತೆ ಕುಮಾರಸ್ವಾಮಿಯವರು ತಮ್ಮ ತಂದೆಯನ್ನು ಧಿಕ್ಕರಿಸಿ ಬಿಜೆಪಿಯೊಡನೆ ಕೈಗೂಡಿಸಿ ಸರ್ಕಾರ ೨೦-೨೦(ಕ್ರಿಕೆಟ್ ಅಲ್ಲ!! :) ತಲಾ ೨೦ ತಿಂಗಳು ರಾಜ್ಯಭಾರ) ಸರ್ಕಾರ ರಚಿಸಿದಾಗ ಎಲ್ಲರೂ ಹುಬ್ಬೇರಿಸಿದ್ದು ಇದೆ. ೨೦ ತಿಂಗಳ ನಂತರ ಅಧಿಕಾರ ಕುಮರಸ್ವಾಮಿಯವರಿಂದ ಬಿಜೆಪಿಗೆ ಹಸ್ತಾಂತರವಾಗಬೇಕಾದ ಸಂದರ್ಭದಲ್ಲಿ ’ಮಾನ್ಯ’ ಮಾಜಿ ಪ್ರಧಾನಿ ಹಾಗು ಜನತಾ ದಳ(ಎಸ್) [so called 'secular']ದ ಅಧ್ಯಕ್ಷರಾದ ದೇವೇಗೌಡರು ಅಡ್ಡಗಾಲು ಹಾಕಿ ತಡೆದಾಗ ಬಿಜೆಪಿ ತನ್ನ ೨ ವರ್ಷ ಹಿಂದಿನ ಸರ್ಕಾರದಲ್ಲಿ ಭಾಗಿಯಾಗುವ ನಿರ್ಧಾರವನ್ನು ನೆನೆಸಿಕೊಂಡು ಮರುಗಿತ್ತೋ ಏನೋ..... ಅದಾದ ಮೇಲಂತೂ ಒಂದು ತಿಂಗಳು ದಿನಕೊಂದು ಬಣ್ಣ ಕ್ಷಣಕೊಂದು ಬಣ್ಣ ಬದಲಾಯಿಸಲು ಪ್ರಾರಂಭಿಸಿತು ರಾಜ್ಯದ ರಾಜಕೀಯ. ಸಾಮಾನ್ಯ ಜನರಿಗೆ ಇದೊಂದು ದೈನಂದಿನ joke ಅಂತ ಅನಿಸಿದ್ದಲ್ಲಿ ಉತ್ಪ್ರೇಕ್ಷೆಯಾಗಲಾರದೇನೋ... ಹಾಗೂ ಹೀಗೂ(ಹೇಗೆ ಎಂದು ಮಾತ್ರ ಕೇಳ್ಬೇಡಿ please!) ಮಾಡಿ ಬಿಜೆಪಿ ತನ್ನ ಸರ್ಕಾರ ರಚನೆ ಮಾಡಿದೆ. ಮುಂಬರುವ ದಿನಗಳಲ್ಲಿ ಇದು ಏನೆಲ್ಲಾ ತಿರುವಗಳನ್ನು ಕಾಣುವುದೋ ಕಾದು ನೋಡಬೇಕು. ಒಂದೆಡೆ ಜನರು ಈ ಸರ್ಕಾರದ ಅವಧಿ ೩-೪ ತಿಂಗಳು ಮಾತ್ರ ಎಂದುಕೊಂಡರೆ, ಇನ್ನೊಂದೆಡೆ ೩-೪ ತಿಂಗಳೊಳಗೇ ಬಿಜೆಪಿಯಲ್ಲೇ ಒಡಕಾಗುವುದು ನೋಡಿ ಎನ್ನುತ್ತಿದ್ದಾರೆ. ಈ ಎಲ್ಲಾ ಊಹಾಪೋಹಗಳ ನಡುವೆ ಎಡ್ಯೂರಪ್ಪನವರು ಕುಮಾರಸ್ವಾಮಿಯವರಂತೆ ಒಳ್ಳೆಯ ಆಡಳಿತ ನೀಡಿ ಒಳ್ಳೆಯ ಹೆಸರು ಸಂಪಾದಿಸಿ, ನಮ್ಮೆಲ್ಲರ ನಿರೀಕ್ಷೆಗೆ ತಕ್ಕಂತೆ ಸರ್ಕಾರ ನಡೆಸಿ ರಾಜ್ಯವನ್ನು ಹಾಗು ಬೆಂಗಳೂರನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ಯುತ್ತಾರೆಂಬ ನಂಬಿಕೆ ಇಟ್ಟು ಶುಭ ಹಾರೈಸಲು ಇಚ್ಛಿಸುತ್ತೇನೆ.
ಕಾದು ನೋಡೋಣ.... ಏನಂತೀರಾ??

1 comment:

sanjaykattimani said...

ನಮ್ಮ ರಾಜಕಾರಣಿಗಳು "ತಲೆ ಇಲ್ಲದ ಕೊಳಿಗಳು" ಅನ್ನುವದರಲ್ಲಿ ಸಂದೇಹವೆ ಇಲ್ಲ.
ತಾವು ಕೊಟ್ಟ ಮಾತಿಗೆ ಬೆಲೆ ಕೊಡುವದಿಲ್ಲ, ಪಕ್ಷ ಉಳಿಸಿಕೊಳ್ಳಲು ಎಂಥ ಕೆಲಸ ಬೇಕಾದರೂ ಮಾಡಬಲ್ಲರು ಎಂದು ತೊರಿಸಿಕೊಟ್ಟಿದ್ದಾರೆ. ಇದೆಲ್ಲದರ ಜೊತೆ "ಜನತೆಯ ಹಿತದೃಷ್ಟಿಯಿಂದ ತೆಗೆದುಕೊಂಡ ನಿರ್ಧಾರ" ಎಂಬ ಹೇಳಿಕೆ ಬೆರೆ... ಕನ್ನಡದ ಜನ ಎನು ಅಷ್ಟೊಂದು ಧಡ್ಡರೆ?
ಒಟ್ನಲ್ಲಿ ಕನ್ನಡಿಗರು ತಲೆ ತಗ್ಗಿಸುವಂಥ ರಾಜಕೀಯ ಮಾಡಿದೆ ಈ ಪರಿವಾರ. ನಮ್ಮ ಕನ್ನಡ ನಾಡಿಗೆ ಇಂಥ ರಾಜಕಾರಣಿಗಳಿಂದ ಎಂದು ಮುಕ್ತಿ ದೊರೆಯುವುದೊ..?